ಬಿ.ಎಂ.ಆರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಜಿ.ಪ್ರೇಮ್ ಅವರು ನಿರ್ಮಿಸುತ್ತಿರುವ ‘ಅಜಿತ್ ಚಿತ್ರದ ಚಿತ್ರೀಕರಣ ಜನವರಿ ಹದಿನಾರರಿಂದ ಆರಂಭವಾಗಲಿದೆ. ಚಿರಂಜೀವಿ ಸರ್ಜಾ ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ.
ಈ ಹಿಂದೆ ‘ಮೊದಲಾಸಲ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಪುರುಷೋತ್ತಮ್ ಈ ಚಿತ್ರದ ನಿರ್ದೇಶಕರು. ಇವರೇ ಚಿತ್ರಕ್ಕೆ ಚಿತ್ರಕಥೆಯನ್ನು ಬರೆದಿದ್ದಾರೆ. ‘ಅಜಿತ್ ತಮಿಳಿನಲ್ಲಿ ಭರ್ಜರಿ ಯಶಸ್ಸು ಕಂಡ ಕಾರ್ತಿ ಹಾಗೂ ತಮನ್ನ ಅಭಿನಯದ ‘ಪಯ್ಯ ಚಿತ್ರದ ರಿಮೇಕ್. ಚಿತ್ರಕ್ಕೆ ಬೆಂಗಳೂರು, ಮೈಸೂರು, ಬಾಂಬೆ ಮುಂತಾದ ಕಡೆ ಅರವತ್ತು ದಿನಗಳ ಚಿತ್ರೀಕರಣ ನಡೆಯಲಿದೆ.
ಐದು ಹಾಡುಗಳಿರುವ ಈ ಚಿತ್ರಕ್ಕೆ ಯುವನ್ಶಂಕರ್ರಾಜಾರ ಸಂಗೀತ ನಿರ್ದೇಶನವಿದೆ. ಸುಂದರನಾಥಸುವರ್ಣ ಛಾಯಾಗ್ರಹಣ, ಹರ್ಷ ನೃತ್ಯ ನಿರ್ದೇಶನ ಹಾಗೂ ಡಿಫ಼ರೆಂಟ್ ಡ್ಯಾನಿ ಸಾಹಸ ನಿರ್ದೇಶನ ಈ ನೂತನ ಚಿತ್ರಕ್ಕಿದೆ.